ನೀ ಸನಿಹಕೆ ಬಂದರೆ
ನೀ ಸನಿಹಕೆ ಬಂದರೆ ಹೃದಯದ ಗತಿ ಏನು?
ಹೇಳು ನೀನು, ನೀನೆ ಹೇಳು
ಇನ್ನೂ ನಿನ್ನ, ಕನಸಿನಲ್ಲಿ ಕರೆ ನೀನು ಶುರು ನಾನು.
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ,
ಏನು ಹೇಳು, ಹೇಳು ನೀನು || ಪ ||
ಸಮೀಪ ಬಂತು ಬಯಕೆಗಳ, ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ, ಸರಾಗವಾದ ಬರವಣಿಗೆ
ನಿನ್ನಾ ಬಿಟ್ಟು ಇಲ್ಲಾ ಜೀವ, ಎಂದೂ ಕೂಡ ಒಂದು ಗಳಿಗೆ
ನಿನ್ನಾ ಮಾತು ಏನೇ ಇರಲಿ, ನಿನ್ನಾ ಮೌನ ನಂದೇ ಏನು?
ನೀ ಸನಿಹಕೆ ಬಂದರೆ ಹೃದಯದ ಗತಿ ಏನು?
ಹೇಳು ನೀನು. ನೀನೆ ಹೇಳು || 1 ||
ನನ್ನಾ ಎದೆಯ, ಸಣ್ಣಾ ತೆರೆಯ, ಧಾರಾವಾಹಿ ನಿನ್ನಾ ನೆನಪು
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವಹಾಗೆ,
ಬಿಗಿದು ತಬ್ಬಿಕೊಳ್ಳೋ ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತಾ ಉಳಿಸು ನನ್ನನು
ದಾರಿಯಲ್ಲಿ, ಬುತ್ತಿ ಹಿಡಿದು
ನಿಂತ ಸಾಥಿ ನೀನೆ ಏನು? || 2 ||
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!